ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗೆ ೨೦ವರ್ಷ ಕಠಿಣ ಸಜೆ

Tuesday, April 20, 2021

ಮೈಸೂರು : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 28ವರ್ಷದ ವ್ಯಕ್ತಿಯೋರ್ವನಿಗೆ ಪೋಕ್ಸೋ ನ್ಯಾಯಾಲಯವು 20ವರ್ಷ ಕಠಿಣ ಸಜೆ ಹಾಗೂ 50ಸಾವಿರ ರೂ. ದಂಡ ವಿಧಿಸಿದೆ.

ಸಂಬಂಧದಲ್ಲಿ ಮಾವನಾಗಬೇಕಿದ್ದ ಆರೋಪಿಯು ಆಟವಾಡುತ್ತಿದ್ದ ಬಾಲಕಿಯನ್ನು ಕಳೆದ ವರ್ಷ ಡಿಸೆಂಬರ್ 19ರಂದು ಚಾಕೋಲೇಟ್ ನೀಡುವ ಆಮಿಷವೊಡ್ಡಿ ಸ್ನಾನದ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ರಕ್ತದ ಕಲೆಯಾಗಿದ್ದ ಬಾಲಕಿಯ ಒಳ ಉಡುಪನ್ನು ಸ್ನಾನದ ಮನೆಯಲ್ಲಿಯೇ ಸುಟ್ಟು ಹಾಕಿದ್ದಲ್ಲದೆ ತನ್ನ ಬಟ್ಟೆಯನ್ನು ಒಗೆಯುವ ಮೂಲಕ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದ. ಬಾಲಕಿಯಿಂದ ವಿಚಾರ ತಿಳಿದ ಪೋಷಕರು ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ತ್ವರಿತವಾಗಿ ವಿಚಾರಣೆ ನಡೆಸಿ ಮಾರ್ಚ್ 6ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಕೈಗೆತ್ತಿಕೊಂಡ ಪೋಕ್ಸೊ ನ್ಯಾಯಾಲಯದ ವಿಶೆಷ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ನಿರಂತರವಾಗಿ ವಿಚಾರಣೆ ನಡೆಸಿ 42ದಿನಗಳಲ್ಲೇ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎಸ್.ಮಂಜುಳಾ ವಾದ ಮಂಡಿಸಿದ್ದರು.

Share