ಅರ್ಧ ದಿನವಾದರೂ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಸಚಿವರಿಗೆ ವರ್ತಕರ ಮನವಿ

Thursday, April 22, 2021

ಮೈಸೂರು, .22:-  ಕೊರೋನಾ ಮಹಾಮಾರಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ನಡುವೆ ನಮಗೆ ಕನಿಷ್ಠ ಅರ್ಧ ದಿನವಾದ್ರೂ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಸಚಿವರಾದ ಎಸ್.ಟಿ ಸೋಮಶೇಖರ್ ಮತ್ತು ಡಾ.ಕೆ.ಸುಧಾಕರ್ ಅವರಿಗೆ ಮೈಸೂರಿನ ವರ್ತಕರು ಮನವಿ ಮಾಡಿದರು.

ಹೋಟೆಲ್ ಗಳಿಗೆ ಅವಕಾಶ ನೀಡಿ ಚಿನ್ನ, ಬಟ್ಟೆ ಅಂಗಡಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ  ಇಂದು ವರ್ತಕರು ಸಚಿವದ್ವಯರಿಗೆ ಮನವಿ ಸಲ್ಲಿಸಿದರು. ಹೋಟೆಲ್ ಗಳಿಗೆ ಅವಕಾಶ ಕೊಟ್ಟಿದ್ದೀರಿ. ಆದರೆ ಸರ್ಕಾರಕ್ಕೆ ಅತಿಹೆಚ್ಚು ರೆವಿವ್ಯೂ ಕೊಡುವಂತ ಚಿನ್ನ, ಬಟ್ಟೆ ಅಂಗಡಿಗಳಿಗೆ ಅವಕಾಶ ನೀಡಿಲ್ಲ. ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದರೆ  ಹೇಗೆ ಎಂದು ಸಚಿವರನ್ನು  ವರ್ತಕರು ಪ್ರಶ್ನಿಸಿದರು.

ಪ್ರಧಾನಿ ಮೋದಿ ಲಾಕ್ ಡೌನ್ ಬೇಡ ಅಂತಾರೆ, ಸಿಎಂ ಯಡಿಯೂರಪ್ಪ ಲಾಕ್ ಡೌನ್ ವಿರೋಧ ಮಾಡ್ತಾರೆ. ನೀವು ಹೇಳಿದ ಎಲ್ಲಾ ನಿಯಮಗಳನ್ನುಪಾಲನೆ ಮಾಡುತ್ತೇವೆ. ನಮಗೆ ವ್ಯಾಪಾರ ಮಾಡಲು ಅವಕಾಶ ಕೊಡಿ. ಲಾಕ್ ಡೌನ್ ಬೇಡ ಅಂತ ಪ್ರಧಾನಿಗಳೆ ಹೇಳಿದ್ದಾರೆ. ನಾವೂ ಈಗಾಗಲೆ ಸಾಕಷ್ಟು ನಷ್ಟದಲ್ಲಿ ಇದ್ದೇವೆ. ಬಾಡಿಗೆ ಕಟ್ಟಲೂ ಆಗುತ್ತಿಲ್ಲ ಎಂದು ಸಚಿವರ  ಬಳಿ ವರ್ತಕರು ತಮ್ಮ ಅಳಲು ತೋಡಿಕೊಂಡರು.

ಬಟ್ಟೆ ಅಂಗಡಿ, ಚಿನ್ನದ ಅಂಗಡಿಗಳ, ಟೀ ಅಂಗಡಿಗಳನ್ನು ಮಾತ್ರ ಮುಚ್ಚಿಸುತ್ತಿರುವುದು ಸರಿಯಲ್ಲ. ಸರ್ಕಾರ ನಮಗೂ ಕಾಲ ನಿಗದಿ ಮಾಡಿ ಅವಕಾಶ ನೀಡಲಿ. ನೀವು ನೀಡಿದ ಕಾಲಾವಧಿಯಲ್ಲಿ ನಾವು ಕೋವಿಡ್ ನಿಯಮ ಪಾಲನೆ ಮಾಡುತ್ತೇವೆ. ಕನಿಷ್ಠ ಅರ್ಧ ದಿನ ಆದರೂ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ವರ್ತಕರು ಮನವಿ ಮಾಡಿದರು.

Share