ಉಡುಪಿ: ದುಬೈನಿಂದ ಹಿಂತಿರುಗಿದ್ದ 35 ವರ್ಷದ ಮಹಿಳೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

Tuesday, July 13, 2021

ಆಘಾತಕಾರಿ ಘಟನೆಯಲ್ಲಿ, ಬ್ರಹ್ಮಾವರದ ಉಪ್ಪಿನಕೋಟೆಯ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

ಪ್ರಾಥಮಿಕ ಮೂಲಗಳ ಪ್ರಕಾರ, ಭಾನುವಾರ ಕೊಲೆ ನಡೆದಿದ್ದರೂ, ಸೋಮವಾರ ಈ ಬಗ್ಗೆ ಸುದ್ದಿ ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ದುಬೈನಿಂದ ಭಾರತಕ್ಕೆ ಮರಳಿದ ಗಂಗೊಳ್ಳಿ ಮೂಲದ ವಿಶಾಲಾ ಗಾಣಿಗ (35) ಹೀಗೆ ಶವವಾಗಿ ಪತ್ತೆಯಾಗಿರುವ ಮಹಿಳೆ. 

ಮಹಿಳೆ ತನ್ನ ತಂದೆಯೊಡನೆ ಗಂಗೊಳ್ಳಿಗೆ ತೆರಳಬೇಕಾಗಿತ್ತು ಎಂದು ವರದಿ ಹೇಳಿದೆ. ಆದರೆ ಆಕೆ ಬ್ಯಾಂಕಿನಲ್ಲಿ ಕೆಲಸವಿರುವುದಾಗಿ ಹೇಳಿದ್ದರಿಂದ ತನ್ನ ಅಪಾರ್ಟ್ ಮೆಂಟ್ ಗೆ ಮರಳಿದ್ದಳು. ಇದನ್ನು ಅನುಸರಿಸಿ ವಿಶಾಲಾ ತನ್ನ ತಂದೆಗೆ ಗಂಗೊಳ್ಳಿಗೆ ತೆರಳಲು ಹೇಳಿದ್ದಾರೆ. ಅಲ್ಲದೆ ತಾನು ಗಂಗೊಳ್ಳಿಗೆ ನಂತರ ಬಂದು ಭೇಟಿ ಆಗುವುದಾಗಿ ಹೇಳಿದ್ದರು.

ಆದರೆ ಎಷ್ಟು ಸಮಯವಾದರೂ ವಿಶಾಲಾ ಬರದಾಗ ಆಕೆಯ ತಂದೆ ಅವಳು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ವೇಳೆ ವಿಶಾಲಾ ಮೃತಪಟ್ಟಿರುವುದು ಗೊತ್ತಾಗಿದೆ.

ವಿಶಾಲಾಳ ಕುತ್ತಿಗೆಗೆ ಆದ ಗಾಯಗಳ ಪ್ರಕಾರ, ಕೊಲೆಗಾರರು ಅವಳನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಸಾಧ್ಯತೆ ಇದೆ.

ಉಡುಪಿ ಎಸ್ಪಿ ಎನ್ ವಿಷ್ಣುವರ್ಧನ್, ಡಿವೈಎಸ್ಪಿ ಕುಮಾರಚಂದ್ರ ಮತ್ತು ಇಲಾಖೆಯ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Share