ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ : ಗಡಿಯಲ್ಲಿ‌ ಕಟ್ಟೆಚ್ಚರ

Ravi K.

Tuesday, February 23, 2021

ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಮೈಸೂರು-ಕೇರಳ ಗಡಿಯಲ್ಲಿ‌ ಕಟ್ಟೆಚ್ಚರವಹಿಸಲಾಗಿದೆ.
ನಿನ್ನೆಯಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಉಸ್ತುವಾರಿ ಸಚಿವರು ಸಭೆ ನಡೆಸಿದ್ದು, ಹೆಚ್.ಡಿ.ಕೋಟೆಯ ಬಾವಲಿ ಗಡಿಯಲ್ಲಿ ಕೇರಳದಿಂದ ಬರುವ ವಾಹನಗಳು ಹಾಗೂ ವ್ಯಕ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ.
ತಾಲೂಕು ಆರೋಗ್ಯಾಧಿಕಾರಿ ಹಾಗೂ ತಾಲೂಕು ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಪಾಸಣಾ ಕಾರ್ಯಚರಣೆ. ಬಾವಲಿ ಗಡಿಯಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆ ನೇಮಕ ಮಾಡಲಾಗಿದೆ.
ಬಾವಲಿ ಚೆಕ್ ಪೋಸ್ಟ್ ಬಳಿ ಕೇರಳದಿಂದ ಬರುವ ಪ್ರಯಾಣಿಕರಿಗೆ‌ ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಗಡಿಗೆ ಬರುವವರ ಮಾಹಿತಿ ಸಂಗ್ರಹಿಸುತ್ತಿದೆ. ಗಡಿ ಪ್ರವೇಶಿಸುವವರಿಗೆ ಕೋವಿಡ್ ರಿಪೋರ್ಟ್ ಹಾಜರು ಕಡ್ಡಾಯಗೊಳಿಸಲಾಗಿದ್ದು, ಕೋವಿಡ್ ರಿಪೋರ್ಟ್ ತೋರಿಸಿದರಷ್ಟೆ ಪ್ರವೇಶ ನೀಡಲು ನಿರ್ಧಾರಿಸಲಾಗಿದೆ. ಪೊಲೀಸ್ ಸಿಬ್ಬಂದಿ ಸಹಕಾರದಲ್ಲಿ ಜಂಟಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Share