ಕೊರೋನಾ ಹೆಚ್ಚಳ ಹಿನ್ನೆಲೆ: ಅಂಗಡಿ ಮುಂಗಟ್ಟು ಮುಚ್ಚಿಸಿದ ಪೊಲೀಸರು

Thursday, April 22, 2021

ಮೈಸೂರು.22:- ಮೈಸೂರಿನಲ್ಲಿ ಮೇ 4 ವರಗೆ ಅಗತ್ಯ ಸೇವೆಗಳನ್ನ ಬಿಟ್ಟು ಉಳಿದೆಲ್ಲ ಅಂಗಡಿಗಳು ಬಂದ್ ಆಗಲಿದೆ. ಮೈಸೂರಿನಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ  ಮೇ 4 ವರಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು  ಡಿಸಿಪಿ ಡಾ..ಎನ್.ಪ್ರಕಾಶ್  ಗೌಡ ಹೇಳಿದರು.

ಪೊಲೀಸ್ ಇಲಾಖೆಯ ಮನವಿ ಮಾಡಿದ  ಹಿನ್ನಲೆಯಲ್ಲಿ ಮೈಸೂರಿನ ಕಮರ್ಷಿಯಲ್ ಸ್ಟ್ರೀಟ್ ಬಹುತೇಕ ಅಂಗಡಿಗಳು ಇಂದು ಬಾಗಿಲು ಮುಚ್ಚಿವೆ.  ನಾಳೆ ಸಂಜೆ 6ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ವರೆಗೆ ವೀಕೆಂಡ್ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ   ವೇಳೆಯಲ್ಲಿ  ಮೆಡಿಕಲ್, ಮಾಂಸದಂಗಡಿ, ತರಕಾರಿ, ಹಣ್ಣು ಖರೀದಿಸುವವರಿಗೆ ಮಾತ್ರ ಬೆಳಗ್ಗೆ 6ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಮಾಂಸ ಮಾರಾಟಗಾರರು ಅಗತ್ಯಕ್ಕೂ ಹೆಚ್ಚು ಮಾಂಸ ಮಾರಾಟಕ್ಕೆ ಮುಂದಾಗಬಾರದು. ಕೇವಲ ನಿಗದಿತ ಸಮಯಕ್ಕಾಗುವಷ್ಟು ಮಾಂಸ ಮಾರಾಟಕ್ಕೆ ಮುಂದಾಗಿ. ಅನಗತ್ಯ ಮಾಂಸ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸದಿರಿ. ಹೇರ್ ಸಲೂನ್ , ಬ್ಯೂಟಿ ಪಾರ್ಲರ್ ಗಳು ವೀಕೆಂಡ್ ಕರ್ಫ್ಯೂ ನಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಬಾರ್. ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ  ಕೇವಲ ಪಾರ್ಸಲ್ ಗೆ ಮಾತ್ರ ಅವಕಾಶ ಎಂದು ಡಿಸಿಪಿ ಡಾ..ಎನ್.ಪ್ರಕಾಶ್ ಗೌಡ ತಿಳಿಸಿದರು.

ಪೊಲೀಸ್ ಇಲಾಖೆ ಕೊರೋನಾ ಹೆಚ್ಚುತ್ತಿರುವುದರಿಂದ ಜನತೆ ಗುಂಪು ಸೇರಬಾರದೆಂದು 144 ಜಾರಿಗೊಳಿಸಿದ್ದು, ಅದರನ್ವಯ ಮಳಿಗೆಗಳಲ್ಲಿ ಗುಂಪು ಸೇರಲು ಅವಕಾಶವಿರದ ಹಿನ್ನೆಲಯಲ್ಲಿ ಪೊಲೀಸ್ ಇಲಾಖೆಯ ಮನವಿಯ ಮೇರೆಗೆ ಜನತೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆಂದು ತಿಳಿದು ಬಂದಿದೆ.

Share