ಕೋವಿಡ್ ಬಂದ ಮೇಲೆ ಸಿದ್ದರಾಮಯ್ಯ ಏನೇನೋ ಮಾತಾಡುತ್ತಾರೆ: ಎಸ್ ಟಿ.ಸೋಮಶೇಖರ್

Friday, October 1, 2021

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಕೋವಿಡ್ ಬಂದ ಮೇಲೆ ತಾವು ಏನು ಮಾತನಾಡುತ್ತಿದ್ದೇನೆ ಎಂಬುದೇ ಗೊತ್ತಾಗುತ್ತಿಲ್ಲ. ಅವರಿಗೆ ತಾಲಿಬಾನ್ ಗೊತ್ತಿಲ್ಲ, ಬಿಜೆಪಿ ಗೊತ್ತಿಲ್ಲ. ಯಾವುದಕ್ಕೂ ಯಾವ ಸಂಬAಧವೂ ಇಲ್ಲದೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್  ವ್ಯಂಗ್ಯವಾಡಿದರು.

ನಗರದಲ್ಲಿ ಶುಕ್ರವಾರ ದಸರಾ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಆರ್.ಎಸ್.ಎಸ್ ಬಗ್ಗೆ ತಿಳಿಯಬೇಕಾದರೆ ಯಾವುದಾದರೂ ಆರ್.ಎಸ್.ಎಸ್ ಶಾಖೆಗೆ ಬರಲಿ. ಅವರು ಶಾಖೆಗೆ ಬರುವುದಾದರೆ ನಾವೇ ಅವರನ್ನು ಖುದ್ದಾಗಿ ಒಂದು ಶಾಖೆಗೆ ಕರೆದುಕೊಂಡು ಹೋಗುತ್ತೇವೆ. ಕೋವಿಡ್ ಆದ ನಂತರ ತಾನೇನು ಮಾತನಾಡುತ್ತಿದ್ದೇನೆ. ಏನು ಸಂದೇಶ ಕೊಡುತ್ತಿದ್ದೇನೆ ಎಂಬುದರ ಮಾಹಿತಿಯೇ ಇಲ್ಲ. ಅವರಿಗೆ ಮಾನಸಿಕವಾಗಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಬೇಕಾದರೆ ತಿಳಿದುಕೊಂಡು ಹೇಳುತ್ತೇನೆ ಎಂದರು.

ಸಿಎA ಚಾಮರಾಜನಗರಕ್ಕೆ ಬರುತ್ತಾರೆ:

ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು  ಬಂದೇ ಬರುತ್ತಾರೆ. ಅ. ೬ ರ ಸಾಯಂಕಾಲ ಮುಖ್ಯ ಮಂತ್ರಿಗಳು ಮೈಸೂರಿಗೆ ಬರುತ್ತಾರೆ. ರಾಷ್ಟçಪತಿಗಳು ಮೈಸೂರಿಗೆ ಬಂದು ಮೈಸೂರಿನಿಂದ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗುತ್ತಾರೆ.  ಬಿಳಿಗಿರಿ ರಂಗನಬೆಟ್ಟ ಮುಗಿಸಿ ಚಾಮರಾಜನಗರಕ್ಕೆ ಹೋಗಿ ೪.೩೦ಕ್ಕೆ ಮೈಸೂರು ಏರ್ ಪೋರ್ಟ್ಗೆ ಬರುತ್ತಾರೆ.  ಏರ್ ಪೋರ್ಟ್ ನಿಂದ ಶೃಂಗೇರಿಗೆ ಪ್ರಯಾಣಿಸುತ್ತಾರೆ. ಮುಖ್ಯಮಂತ್ರಿಗಳು ದಸರಾ ಉದ್ಘಾಟನೆಯಲ್ಲಿಯೂ ಭಾಗವಹಿಸುತ್ತಾರೆ ಎಂದರು.

ರಾಜವAಶಸ್ಥರಿಗೆ ನೀಡುವ ರಾಜಧನ ಕುರಿತು ಪ್ರತಿಕ್ರಿಯಿಸಿದ ಅವರು ಪ್ರತಿವರ್ಷ ಎಷ್ಟು ಕೊಡುತ್ತೇವೆಯೋ ಅಷ್ಟೇ ಕೋಡುತ್ತೇವೆ. ನಿನ್ನೆ ಮುಖ್ಯಮಂತ್ರಿಗಳು ೬ ಕೋಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ರಾಜಧನ ಇರಬಹುದು, ಬೇರೆ ಬೇರೆ ಇರಬಹುದು ಚಾಮರಾಜನಗರಕ್ಕೆ ಮತ್ತು ಮಂಡ್ಯ ಜಿಲ್ಲೆಯ ಮಹೋತ್ಸವದ ವೆಚ್ಚಗಳ ಬಗ್ಗೆಯೂ ತೀರ್ಮಾನಿಸಲಾಗುವುದು ಎಂದರು.


Share