ಕೋವಿಡ್-19 ಸಂಬಂಧ ಸಹಾಯವಾಣಿ ಆರಂಭ

Thursday, April 22, 2021

ಮೈಸೂರು.22:- ಮೈಸೂರು ನಗರದಲ್ಲಿ ಪ್ರತಿದಿನ ಹೆಚ್ಚು ಹೆಚ್ಚು ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದುಸಾರ್ವಜನಿಕರಿಗೆ ಅನುಕೂಲವಾಗುವಂತೆ  ಮೈಸೂರು ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿ ತೆರೆದು ಸಹಾಯವಾಣಿ ಆರಂಭಿಸಿದೆ.

ವಾಣಿ ವಿಲಾಸ ನೀರು ಸರಬರಾಜು ಆವರಣದಲ್ಲಿರುವ ಸಭಾಂಗಣದಲ್ಲಿ ಸಹಾಯವಾಣಿ ಆರಂಭವಾಗಿದ್ದು, ನಿಯಂತ್ರಣ ಕೊಠಡಿ ಕೋವಿಡ್-19 ಸಂಬಂಧ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ. ದಿನದ 24 ಗಂಟೆಗಳ ಕಾಲ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.

ವಿವರ ಇಂತಿದೆ

ಕೃಷ್ಣರಾಜ (0821 – 2517922), (0821 – 2519222), ಚಾಮರಾಜ (0821 – 2519922), ಚಾಮುಂಡೇಶ್ವರಿ ಕ್ಷೇತ್ರದ ವಾರ್ಡ್ ನಂ 44, 45, 46, 58 ನಾಗರೀಕರಿಗೆ (0821 – 2519522), ನರಸಿಂಹರಾಜ (0821 – 2517422), (0821 – 2515522) ಸಂಖ್ಯೆಗಳ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.

ನಾಗರಿಕರು ಕೋವಿಡ್ ಸಂಬಂಧ ಸಹಾಯ ಬೇಕಿದ್ದಲ್ಲಿ ಆಯಾ ಕ್ಷೇತ್ರದ ಸಹಾಯವಾಣಿ ಸಂಖ್ಯೆ ಸಂಪರ್ಕಿಸುವಂತೆ ಪಾಲಿಕೆ ಪ್ರಕಟಣೆ ಹೊರಡಿಸಿದೆ.

Share