ಜೂಜಾಟದ ಮೇಲೆ ದಾಳಿ : 10 ಮಂದಿ ಸೇರಿದಂತೆ 1,73,600 ರೂ ನಗದು ವಶ

Wednesday, April 14, 2021

ಮೈಸೂರು : ಜೂಜಾಟ ನಡೆಸುತ್ತಿದ್ದ ಸ್ಥಳವೊಂದರ ಮೇಲೆ ದಾಳಿ ನಡೆಸಿದ ಮೈಸೂರು ಸಿಸಿಬಿ ಪೊಲೀಸರು ಹತ್ತು ಮಂದಿಯನ್ನು ವಶಕ್ಕೆ ಪಡೆದಿದ್ದು, ಅವರ ಬಳಿ ಇದ್ದ 1,73,600 ರೂ ನಗದು ವಶ ಪಡಿಸಿಕೊಂಡಿದ್ದಾರೆ.

12-04-2021 ರಂದು ಸರಸ್ವತಿಪುರಂ ಪೊಲೀಸ್ ಠಾಣಾ ಸರಹದ್ದಿನ ಬಿ.ಇ.ಎಂ.ಎಲ್ ಬಡಾವಣೆ (ರಾಜರಾಜೇಶ್ವರಿ ನಗರ) ಲೇಔಟ್, 2ನೇ ಹಂತದಲ್ಲಿರುವ ಚೆನ್ನಪ್ಪ ಎಂಬುವವರಿಗೆ ಸೇರಿದ ತೆಂಗಿನ ತೋಟದಲ್ಲಿರುವ ಕಲ್ನಾರ್ ಶೀಟ್‍ ನ ಮನೆಯ ಒಳಭಾಗದ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿ.ಸಿ.ಬಿ. ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಸ್ವತಿಪುರಂ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಜೂಜಾಟದಲ್ಲಿ ತೊಡಗಿದ್ದ  ಶಿವರಾಜ @ ಶಿವ ಬಿನ್ ಕೃಷ್ಣೇಗೌಡ,( 31 ) ಮನೆ ನಂ. 6, 2ನೇ ಮೇನ್, ಜಯನಗರ, ಮೈಸೂರು ನಗರ, ಜಗದೀಶ ಸಿ ಬಿನ್ ಚೌಡಯ್ಯ, (41), ಮನೆ ನಂ. 53, 3ನೇ ಕ್ರಾಸ್, 3ನೇ ಮೇನ್, ಜಯನಗರ ಮೈಸೂರು ನಗರ, ನಾಗಸುಂದರ ಬಿನ್ ಸೋಮಶೇಖರ್,( 29), ಮನೆ ನಂ. 90, 7ನೇ ಕ್ರಾಸ್, ಸಿ ಬ್ಲಾಕ್, ಜೆ.ಪಿ. ನಗರ, ಮೈಸೂರು ನಗರ ರಘುಕುಮಾರ್ ಬಿನ್ ನಂಜುಂಡಪ್ಪ, (38), ಮನೆ ನಂ. 36, ಗೋಕುಲಂ 4ನೇ ಹಂತ, ಮಂಜುನಾಥಪುರ, ಮೈಸೂರು ನಗರ.

ಮಧುಸೂದನ್ ಬಿನ್ ಗುರುರಾಜ್, (59), ಮನೆ ನಂ: 619, 7ನೇ ಡಿ ಕ್ರಾಸ್, ಹೆಬ್ಬಾಳ್ 1ನೇ ಹಂತ, ಮೈಸೂರು ನಗರ, ನಾಗರಾಜು ಬಿನ್ ಸೋಮಣ್ಣ, (40), ಮನೆ ನಂ. 40, ಗೋಕುಲಂ 4ನೇ ಹಂತ, ಮಂಜುನಾಥಪುರ, ಮೈಸೂರು ನಗರ., ಮಶಂಕರ್ ಬಿನ್ ವಿಜಯ್, (30), ಮನೆ ನಂ, 27, 4ನೇ ಕ್ರಾಸ್, ರಾಮಮಂದಿರ ರಸ್ತೆ, ಜಯನಗರ, ಮೈಸೂರು ನಗರ. ರವಿಕುಮಾರ್ ಟಿ.ಜಿ ಬಿನ್ ಗೋವಿಂದರಾಜ್, (39), ಮನೆ ನಂ. 34, 4ನೇ ಕ್ರಾಸ್, ಜಯನಗರ, ಮೈಸೂರು ನಗರ, ದಕ್ಷಿತ್ ಬಿನ್ ಸುರೇಶ, (20), ಮನೆ ನಂ. 62, 2ನೇ ಮೇನ್, 2ನೇ ಕ್ರಾಸ್, ಜಯನಗರ, ಮೈಸೂರು ನಗರ, ರವಿ ಬಿನ್ ಲಕ್ಕೇಗೌಡ, (38), ಮನೆ ನಂ. 333, 7ನೇ ಕ್ರಾಸ್, ಗಣೇಶ್ ಭಂಡಾರ್, ಟಿ.ಕೆ ಬಡಾವಣೆ, ಮೈಸೂರು ನಗರ ಎಂಬವರುಗಳನ್ನು ವಶಕ್ಕೆ ತೆಗೆದುಕೊಂಡು, ಇವರುಗಳು ಜೂಜಾಟಕ್ಕೆ ಪಣವಾಗಿಟ್ಟಿದ್ದ 1,73,600 ರೂ. ನಗದು ಹಣ ಹಾಗೂ ಜೂಜಾಟಕ್ಕೆ ಬಳಸಿದ್ದ 52 ಇಸ್ವೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.  ಇವರ  ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ದಾಳಿ ಕಾರ್ಯವನ್ನು ಮೈಸೂರುನಗರದ ಡಿ.ಸಿ.ಪಿ. ಡಾ. ಎ.ಎನ್.ಪ್ರಕಾಶ್‍ಗೌಡ , ಗೀತಪ್ರಸನ್ನ ರವರ ಮಾರ್ಗದರ್ಶನದಲ್ಲಿ, ಸಿಸಿಬಿ ಎ.ಸಿ.ಪಿ. ಸಿ.ಕೆ. ಅಶ್ವತ್ಥನಾರಾಯಣರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ ಆರ್. ಜಗದೀಶ್, ಜಿ.ಶೇಖರ್, ವಿ.ಎಸ್.ಶಶಿಕುಮಾರ್, ಪಿ.ಎಸ್.ಐ. ಅನಿಲ್‍ಕುಮಾರ್, ಸರಸ್ವತಿಪುರಂ ಠಾಣೆಯ ಪೊಲೀಸ್ ಇನ್ಸಪೆಕ್ಟರವರಾದ ಸಿ.ತಿಮ್ಮರಾಜು, ಪಿ.ಎಸ್.ಐ.   ಭವ್ಯ. ಎನ್. ಸಿ.ಸಿ.ಬಿ.ಘಟಕದ ಸಿಬ್ಬಂದಿಗಳಾದ ಅಸ್ಗರ್‍ಖಾನ್, ಸಿ. ಚಿಕ್ಕಣ್ಣ, ರಾಮಸ್ವಾಮಿ, ಶಿವರಾಜು.ಸಿ.ಎನ್, ಪುರುಷೋತ್ತಮ್, ಅನಿಲ್, ಗೌತಮ್‍ರವರುಗಳು ಮಾಡಿರುತ್ತಾರೆ.

Share