ಪ್ರತ್ಯೇಕ ರಸ್ತೆ ಅಪಘಾತ : ಮೂವರು ಸಾವು

Ravi K.

Tuesday, February 16, 2021

ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ವಕೀಲ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಆಯರಹಳ್ಳಿ ಬಳಿ ಬೈಕ್ ನಿಂದ ಆಯತಪ್ಪಿ ಬಿದ್ದು ವಕೀಲ ವಿನೋದ್ ರಾಜ್ (43) ಸಾವನ್ನಪ್ಪಿದ್ದಾರೆ. ಸಣ್ಣೇಗೌಡರ ಕಾಲೋನಿ ಬಳಿ ಎರಡು ಬೈಕ್ ನಡುವೆ ನಡೆದ ಡಿಕ್ಕಿಯಲ್ಲಿ ಸಂಪತ್ ಪವಾರ್ (34)ಸಾವನ್ನಪ್ಪಿದ್ದಾರೆ.
ಬೀಜಗನಹಳ್ಳಿ ಬಳಿ ಗೂಡ್ಸ್ ವಾಹನ ಡಿಕ್ಕಿಯಾಗಿ ರೈತ ಮಹಿಳೆ ಜಯಮ್ಮ (54) ಸಾವನ್ನಪ್ಪಿದ್ದಾರೆ. ಎರಡು ಅಪಘಾತ ಪ್ರಕರಣ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ವಕೀಲ ವಿನೋದ್ ಅಪಘಾತ ಪ್ರಕರಣ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share