ಬಾಗ್ದಾದ್ ನಲ್ಲಿ ಈದ್ ಗೂ ಮುನ್ನ ರಸ್ತೆ ಬದಿ ಬಾಂಬ್ ಸ್ಫೋಟ: 25 ಮಂದಿ ಸಾವು

Wednesday, July 21, 2021

ಬಾಗ್ದಾದ್ ನ ಉಪನಗರವನ್ನು ಗುರಿಯಾಗಿರಿಸಿಕೊಂಡು ರಸ್ತೆ ಬದಿಯಲ್ಲಿ ನಡೆಸಿದ ಬಾಂಬ್ ಸ್ಫೋಟಕ್ಕೆ 25 ಮಂದಿ ಬಲಿಯಾಗಿದ್ದಾರೆ. 

ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕ್ ನ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈದ್ ಆಚರಣೆಯ ಹಿನ್ನೆಲೆಯಲ್ಲಿ ಜನತೆ ವಸ್ತುಗಳ ಖರೀದಿಯಲ್ಲಿ  ಸದರ್ ನಗರದ ವಹೈಲತ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ.

ಘಟನೆಗೆ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇದೇ ಪ್ರದೇಶಗಳಲ್ಲಿ ಈ ಹಿಂದೆ ಇಸ್ಲಾಮಿಕ್ ಸ್ಟೇಟ್ ಇಂತಹ ಸ್ಫೋಟಗಳನ್ನು ನಡೆಸಿದೆ. 

ಈ ವರ್ಷದಲ್ಲಿ ಜನನಿಬಿಡ ಮಾರುಕಟ್ಟೆಯಲ್ಲಿ ಸಂಭವಿಸಿರುವ ಮೂರನೇ ಸ್ಫೋಟ ಪ್ರಕರಣ ಇದಾಗಿದ್ದು, ಮಾರುಕಟ್ಟೆ ಪ್ರದೇಶದಲ್ಲಿ ಜವಾಬ್ದಾರಿ ಹೊಂದಿದ್ದ ಫೆಡರಲ್ ಪೊಲೀಸ್ ರೆಜಿಮೆಂಟ್ ನ ಕಮಾಂಡರ್ ನ್ನು ಬಂಧಿಸಿ ವಿಚಾರಣೆ ನಡೆಸುವುದಕ್ಕೆ ಪ್ರಧಾನಿ ಮುಸ್ತಫಾ-ಅಲ್-ಕಧಿಮಿ ಆದೇಶಿಸಿದ್ದಾರೆ. 

Share