ಮೃಗಾಲಯಕ್ಕೆ ಬಂದು ಕ್ವಾರಂಟೈನ್‌ ಆದ ಜರ್ಮನಿ, ಸೀಂಗಪೂರ್, ಮಲೇಶಿಯಾ ಅತಿಥಿಗಳು!

Saturday, October 2, 2021

ಮೈಸೂರಿಗೆ ಹೊಸ ಪ್ರಾಣಿಗಳು ಬರುವುದು ಅಪರೂಪವೇನಲ್ಲ. ಆದರೆ, ವನ್ಯಜೀವಿ ಸಪ್ತಾಹದ ಇಂದಿನ ವಿಶೇಷ ದಿನದಂದೇ ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾ ಅತಿಥಿಗಳು ಮೈಸೂರು ಮೃಗಾಲಯಕ್ಕೆ ಬಂದಿಳಿದಿವೆ.

ಎರಡು ಗಂಡು ಗೋರಿಲ್ಲಾಗಳು ಟಬ್ಬೊ (14 ವರ್ಷ), ಡಂಬೋ (8 ವರ್ಷ) ಜರ್ಮನಿಯಿಂದ ಕೊಡುಗೆಯಾಗಿ ಬಂದಿದ್ದು, ಇವಕ್ಕೆ ವಾಸಿಸಲು ಅನುಕೂಲವಾಗುವಂತಹ ಬಿಡಾರದ ವ್ಯವಸ್ಥೆಯನ್ನು ಇನ್ಫೋಸಿಸ್‌ ಮಾಡಿಕೊಟ್ಟಿದೆ.

ಮಲೇಶಿಯಾ, ಸಿಂಗಪೂರ್‌ನಿಂದ ತಲಾ 2 ಗೋರಿಲ್ಲಾಗಳು ಬಂದಿದ್ದು, ಮಲೇಶಿಯಾದ ಮಾರ್ಲಿನ್ (ಗಂಡು- 16 ವರ್ಷ), ಅಟೀನಾ (ಹೆಣ್ಣು- 12 ವರ್ಷ), ಸಿಂಗಪೂರ್‌ನ ಆಫಾ (ಗಂಡು- 7 ವರ್ಷ), ಮಿನಿ (ಹೆಣ್ಣು- 5 ವರ್ಷ) ಮೈಸೂರು ಮೃಗಾಲಯದಲ್ಲಿ ಆಶ್ರಯ ಪಡೆದುಕೊಂಡಿವೆ.

15 ದಿನಗಳ ಹಿಂದೆಯೇ ಈ ವಿದೇಶಿ ಅತಿಥಿಗಳ ಆಗಮನವಾಗಿದೆ. ಕೋವಿಡ್‌ ಮುಂಜಾಗ್ರತೆ ದೃಷ್ಟಿಯಿಂದ ಅವುಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಶೀಘ್ರವೇ ಇವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ‘ಆಂದೋಲನ’ಕ್ಕೆ ತಿಳಿಸಿದ್ದಾರೆ.

Share