ರಾಜಕೀಯಕ್ಕೆ ಎಂದಿಗೂ ಬರುವುದಿಲ್ಲ : ಸೂಪರ್ ಸ್ಟಾರ್ ರಜನಿಕಾಂತ್

Monday, July 12, 2021

ರಾಜಕೀಯಕ್ಕೆ ಮತ್ತೆ ಪ್ರವೇಶದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಸಿದ ಕೇವಲ ಒಂದು ಗಂಟೆಯೊಳಗೆ ಮತ್ತೆ ರಾಜಕೀಯಕ್ಕೆ ಎಂದಿಗೂ ಬರುವುದಿಲ್ಲ ಎಂದು ಪ್ರತಿಪಾದಿಸುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್, ಸಾವಿರಾರು ಅಭಿಮಾನಿಗಳ ನಿರೀಕ್ಷೆಯನ್ನು ಭಗ್ನಗೊಳಿಸಿದ್ದಾರೆ.

ರಜಿನಿ ಮಕ್ಕಳ್ ಮಂದ್ರಾಮ್ ನ್ನು ವಿಸರ್ಜಿಸಲಾಗುವುದು, ಅದು ರಜನಿಕಾಂತ್ ರಾಸಿಗರ್ ನರ್ಪಾಣಿ ಮಂದ್ರಾಮ್ ಫ್ಯಾನ್ಸ್ ಕ್ಲಬ್ ಆಗಿ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ. 

ಆರ್ ಎಂಎಂ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದ ನಂತರ ಹೇಳಿಕೆ ನೀಡಿದ ರಜನಿಕಾಂತ್, ವಿವಿಧ ಸಮಸ್ಯೆಗಳಿಂದಾಗಿ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಭವಿಷ್ಯದಲ್ಲೂ ಯಾವುದೇ ಉದ್ದೇಶ ಇಟ್ಟುಕೊಂಡು ರಾಜಕೀಯಕ್ಕೆ ಬರವುದಿಲ್ಲ, ಆರ್ ಎಂಎಂನ್ನು ವಿಸರ್ಜಿಸಲಾಗುವುದು, ಅದು ರಜನಿಕಾಂತ್ ರಾಸಿಗರ್ ನರ್ಪಾಣಿ ಮಂದ್ರಮ್ ಫ್ಯಾನ್ಸ್ ಕ್ಲಬ್ ಆಗಿ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು. 

ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜಕೀಯಕ್ಕೆ ಬರುವುದಿಲ್ಲ ಎಂದು ಘೋಷಿಸಿದ ನಂತರ ಮಂದ್ರಮ್ ಸ್ಥಿತಿ ಮತ್ತು ಅದರ ಕರ್ತವ್ಯಗಳ ಬಗ್ಗೆ ಪದಾಧಿಕಾರಿಗಳು ಹಾಗೂ ಅಭಿಮಾನಿಗಳಲ್ಲಿ ಪ್ರಶ್ನೆ ಎದ್ದಿತ್ತು. ಈ ಸಮಸ್ಯೆಯನ್ನು ಬಗೆಹರಿಸುವುದು ನನ್ನ ಕರ್ತವ್ಯ ಎಂದರು.

ಕಳೆದ ವರ್ಷ ಡಿಸೆಂಬರ್ 29 ರಂದು ರಾಜಕೀಯಕ್ಕೆ ಬರುವುದಿಲ್ಲ ಎಂದು ರಜನಿಕಾಂತ್ ಘೋಷಣೆ ಮಾಡಿದ್ದರು. ನಾನು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಲೀ ಅಥವಾ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಅವರು ಹೇಳಿಕೆ ನೀಡಿದ್ದರು.

Share