ರಾಜಾಹುಲಿ ಎಂದೆದಿಗೂ ರಾಜಾಹುಲಿನೇ- ಕಾ.ಪು ಸಿದ್ದಲಿಂಗಸ್ವಾಮಿ

Tuesday, July 20, 2021

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿರುವ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು ಸಿದ್ದಲಿಂಗಸ್ವಾಮಿ, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ. ರಾಜಾಹುಲಿ ಎಂದೆದಿಗೂ ರಾಜಾಹುಲಿನೇ ಎಂದು ನುಡಿದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಕಾ.ಪು ಸಿದ್ದಲಿಂಗಸ್ವಾಮಿ, ಯಡಿಯೂರಪ್ಪ ನವರೇ ನಮ್ಮ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ‌. ಯಡಿಯೂರಪ್ಪ ಬಿಜೆಪಿಗೆ ಆತ್ಮ ಎಂದರು.

ಇನ್ನು ಸಿಎಂ ಯಡಿಯೂರಪ್ಪನವರು ನನಗೆ ಜವಾಬ್ದಾರಿ ನೀಡಿದ್ದಾರೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಶ್ರಮವಹಿಸಿ ಕೆಲಸ ಮಾಡುತ್ತೇನೆ. ಈಗಾಗಲೇ ಪ್ರವಾಸೋದ್ಯಮ ಸಚಿವರು ಹಲವು ಕಾರ್ಯಕ್ರಮ ಮಾಡ್ತಿದ್ದಾರೆ‌. ಅವರ ಜೊತೆಗೂಡಿ ನಾನು ಕೆಲಸ ಮಾಡುತ್ತೇನೆ. ಹೊಸ ಹೊಸ ಕಾರ್ಯಕ್ರಮಗಳನ್ನು ಅಳವಡಿಸುವ ಚಿಂತನೆ ಇದೆ. ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಕಾ.ಪು ಸಿದ್ಧಲಿಂಗಸ್ವಾಮಿ ತಿಳಿಸಿದರು.


Share