ರೂಪದರ್ಶಿ ನಯಾಬ್‌ ನದೀಮ್‌ ರನ್ನು ನಗ್ನಗೊಳಿಸಿ ಕತ್ತು ಸೀಳಿ ಕ್ರೂರ ಹತ್ಯೆ

Tuesday, July 13, 2021

ಪಾಕಿಸ್ತಾನದಲ್ಲಿ ಅತಿ ಲೋಕ ಸುಂದರಿಯಂತಿದ್ದ ರೂಪದರ್ಶಿಯನ್ನು ಕ್ರೂರವಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಖ್ಯಾತ ರೂಪದರ್ಶಿ ನಯಾಬ್‌ ನದೀಮ್‌ ಅವರನ್ನು ಅನುಮಾನಾಸ್ಪದ ರೀತಿಯಲ್ಲಿ ಭೀಬತ್ಸ ರೀತಿಯಲ್ಲಿ ಕೊಲೆ ಮಾಡಲಾಗಿದೆ.  

ಆಕೆಯ ಕತ್ತು ಸೀಳಿ, ಅತ್ಯಂತ ಕ್ರೂರವಾಗಿ ಕೊಂದು ನಗ್ನ ದೇಹವನ್ನು ಮನೆಯ ಕೋಣೆಯೊಂದರಲ್ಲಿ ಎಸೆದು ಪರಾರಿಯಾಗಿದ್ದಾರೆ. ಮಲ ಸಹೋದರ ನೀಡಿದ ದೂರಿನಿಂದ ಈ ಕೃತ್ಯ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಪ್ರಸಿದ್ಧ ಮಾಡೆಲ್ ನಯಾಬ್ ನದೀಮ್ ಅವರನ್ನು ದುಷ್ಕರ್ಮಿಗಳು ಅನುಮಾನಾಸ್ಪದ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ. ಲಾಹೋರ್‌ನಲ್ಲಿರುವ ಆಕೆಯ ನಿವಾಸದಲ್ಲಿ ಈ ಕೃತ್ಯ ನಡೆದಿದೆ ಎಂದು ಪಾಕಿಸ್ತಾನ ದೈನಿಕ 'ಡಾನ್‌' ವರದಿ ಮಾಡಿದೆ. ಹಂತಕರು ಆಕೆಯ ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ. ನಯಾಬ್ ಅವರ ಮಲ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

29 ವರ್ಷದ ಅವಿವಾಹಿತೆ ನಯಾಬ್ ಲಾಹೋರ್‌ನ ರಕ್ಷಣಾ ಪ್ರದೇಶದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಈ ಕುರಿತು ನಯಾಬ್‌ ಮಲ ಸಹೋದರ ನಸೀರ್‌ ಮಾತನಾಡಿ, ಶನಿವಾರ ಮಧ್ಯರಾತ್ರಿ ರಾತ್ರಿ ಐಸ್ ಕ್ರೀಮ್ ತಿನ್ನಲು ಹೊರಗೆ ಹೋಗಿದ್ದೆವು. ನಂತರ ನಾನು  ಆಕೆಯ ನಿವಾಸದ ಬಳಿ ಬಿಟ್ಟು, ನಾನು ನನ್ನ ಮನೆಗೆ ತೆರಳಿದೆ. 

ಮನೆಗೆ ತೆರಳಿದ ನಂತರ ನಯಾಬ್ ನನಗೆ ಕರೆ ಮಾಡಿದ್ದಳು. ಆದರೆ ನಿದ್ರೆಯಲ್ಲಿದ್ದ ಕಾರಣ ನಾನು ಕರೆ ಸ್ವೀಕರಿಸಿರಲಿಲ್ಲ. ಭಾನುವಾರ ಬೆಳಿಗ್ಗೆ ನಾನು ಮತ್ತೆ ಆಕೆಗೆ ಕರೆ ಮಾಡಿದ್ದೆ, ಆದರೆ ಆಕೆ ಫೋನ್‌ ಲಿಫ್ಟ್ ಮಾಡಲಿಲ್ಲ. ಇದರಿಂದ ಗಾಬರಿಗೊಂಡು ಆಕೆಯನ್ನು ನೋಡಲು ತೆರಳಿದ ನನಗೆ ಭಯಾನಕ ದೃಶ್ಯ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

Share