ರೊಮ್ಯಾಂಟಿಕ್ ಕನ್ನಡ ಮ್ಯೂಸಿಕ್ ಆಲ್ಬಂನಲ್ಲಿ 'ಪದವಿಪೂರ್ವ' ನಟಿ ಯಶ ಶಿವಕುಮಾರ್

Thursday, September 23, 2021

ಪದವಿಪೂರ್ವ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿರುವ ನಟಿ ಯಶ ಶಿವಕುಮಾರ್ ಮತ್ತು ಪ್ರವೀಣ್ ತೇಜ್ ಕನ್ನಡ ಮ್ಯೂಸಿಕ್ ಆಲ್ಬಂ ನಲ್ಲಿ ಹೆಜ್ಜೆ ಹಾಕಿದ್ದಾರೆ. ವೃತ್ತಿಯಲ್ಲಿ ನ್ಯೂರೋ ಸರ್ಜನ್ ಆಗಿರುವ ಡಾ.ಶೈಲೇಶ್ ಕುಮಾರ್ ಬಿ ಎಸ್ ಮತ್ತು ಶಶಿಕಲಾ ಪುಟ್ಟಸ್ವಾಮಿ ಅವರು ಈ ಮ್ಯೂಸಿಕ್ ಆಲ್ಬಂ ನಿರ್ಮಾಪಕರು. 

ಮ್ಯೂಸಿಕ್ ಆಲ್ಬಂ ಹಾಡನ್ನು ಶಶಿಕಲಾ ಅವರೇ ಬರೆದಿದ್ದಾರೆ ಎನ್ನುವುದು ವಿಶೇಷ. ಸಾಯಿ ಕಿರಣ್ ಅವರು ಸಂಗೀತ ಸಂಯೋಜನೆ ಮಾಡಿದ್ದು, ಖ್ಯಾತ ಗಾಯಕ ವಿಜಯಪ್ರಕಾಶ್ ದನಿಯಲ್ಲಿ ಹಾಡು ಮೂಡಿ ಬಂದಿದೆ.

ತಲವಾರ್ ಪೇಟೆ ಎನ್ನುವ ಸಿನಿಮಾ ನಿರ್ಮಾಣ ಹಂತದಲ್ಲಿದೆ ಎಂದು ನಿರ್ಮಾಪಕ ಶೈಲೇಶ್ ಕುಮಾರ್ ಹೇಳಿದ್ದಾರೆ.ಆದರ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ಮಾಡುವ ಯೋಜನೆ ಅವರದು. ಆ ಸಿನಿಮಾದಲ್ಲಿ ಗಣೇಶ್ ಅವರು ನ್ಯೂರೊ ಸರ್ಜನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.


Share