ಸೊಸೆಗೆ ಚಾಕುವಿನಿಂದ ಚುಚ್ಚಿ ನಂತರ ಅತ್ತೆ ಆತ್ಮಹತ್ಯೆಗೆ ಶರಣು.

Wednesday, September 29, 2021

ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸೊಸೆಗೆ ಚಾಕುವಿನಿಂದ ಚುಚ್ಚಿ ಕೊಂದ ಅತ್ತೆ ನಂತರ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದÀ ಬೋಗಾದಿಯಲ್ಲಿ ನಡೆದಿದೆ.

ನಿವೃತ್ತ ಶಿಕ್ಷಕಿ ಮಾದೇವಿ (೬೨) ಆತ್ಮಹತ್ಯೆಗೆ ಶರಣಾದವರು. ಸೊಸೆ ವೇದಾವತಿ(೨೮) ಚಾಕು ಇರಿತದಿಂದ ಮೃತರಾಗಿದ್ದಾರೆ.

ಅತ್ತೆ ಮಾದೇವಿ ಮಹಡಿ ಮನೆಯಲ್ಲಿ, ಕೆಳಗಡೆ ಮನೆಯಲ್ಲಿ ಮಗ-ಸೊಸೆ ವೇದಾವತಿ ವಾಸವಿದ್ದರು. ಈ ನಡುವೆ ಕ್ಷುಲ್ಲಕ ಕಾರಣಕ್ಕೆ ಅತ್ತೆ ಸೊಸೆ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಮಾದೇವಿ ಸೊಸೆ ವೇದಾವತಿಗೆ ಚಾಕುವಿನಿಂದ ಚುಚ್ಚಿದ್ದಾರೆ. 

ಈ ವೇಳೆ ಸೊಸೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಸೇರಿದ್ದರು. ಗಾಯಗೊಂಡ ವೇದಾವತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಸೆಯನ್ನ ಆಸ್ಪತ್ರೆಗೆ ಕರೆದೊಯ್ದ ವೇಳೆ ಅತ್ತೆ ಮಾದೇವಿ ಚಾಕು ಚುಚ್ಚಿದ ವಿಚಾರ ಎಲ್ಲರಿಗೂ ತಿಳಿಯಿತೆಂದು ಅಂಜಿ ನೇಣಿಗೆ ಶರಣಾಗಿದ್ದಾರೆ. 

ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share