ಹಗಲಿರುಳು ಶ್ರಮಿಸಿದ್ದೇವೆ, ಮಾನ್ಯತೆ ನೀಡುವಲ್ಲಿ ಮೈಸೂರು ಪಾಲಿಕೆ ವಿಫಲ: 'ಕೋವಿಡ್ ಮಿತ್ರ' ಸ್ವಯಂ ಸೇವಕರ ಅಳಲು

Wednesday, July 21, 2021

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಗಳ ಸಂಖ್ಯೆ ಹೆಚ್ಚಳವಾಗಿದ್ದ ಸಮಯದಲ್ಲಿ ಜಿಲ್ಲಾಡಳಿತಕ್ಕೆ ಸಹಾಯ ಮಾಡಿದ ವೈದ್ಯಕೀಯ ಮತ್ತು ವೈದ್ಯಕೀಯೇತರ ಸ್ವಯಂ ಸೇವಕರಿಗೆ ಅಧಿಕಾರಿಗಳು ನೀಡಿದ್ದ ಮಾನ್ಯತೆಯ ಭರವಸೆ ದೊರೆತಿಲ್ಲ.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಮೈಸೂರಿನ ಎಲ್ಲಾ ಕೋವಿಡ್ ಮಿತ್ರ ಕೇಂದ್ರಗಳಲ್ಲಿ ಹಗಲಿರುಳೆನ್ನದೆ ಸುಮಾರು 2 ತಿಂಗಳುಗಳ ಕಾಲ, ಸ್ವಯೇ ಸೇವಕರು ಕೆಲಸ ಮಾಡಿದ್ದಾರೆ. ಮುಂಚೂಣಿಯಲ್ಲಿದ್ದ ಕೋವಿಡ್ ವಾರಿಯರ್ ಗಳು ತಮ್ಮ ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದೇ ಕೆಲಸ ಮಾಡಿದ್ದಾರೆ, ಆದರೆ ಜಿಲ್ಲಾಡಳಿತ ಅವರಿಗೆ ಸೂಕ್ತ ಗೌರವ ನೀಡಲು ವಿಫಲವಾಗಿದೆ.

ಕೆಆರ್‌ಎಸ್ ರಸ್ತೆಯ ಪಂಚಕರ್ಮ ಹೈಟೆಕ್ ಆಸ್ಪತ್ರೆ, ಬೀಡಿ ಆಸ್ಪತ್ರೆ, ಸೇಠ್ ಮೋಹನ್‌ದಾಸ್ ತುಳಸಿದಾಸ್ ಆಸ್ಪತ್ರೆ ಮತ್ತು ಹಿನಕಲ್-ಬೊಗಾದಿ ರಿಂಗ್ ರಸ್ತೆಯಲ್ಲಿರುವ ಪಟ್ಟಣ ಯೋಜನಾ ಕಟ್ಟಡದಲ್ಲಿ ಸ್ಥಾಪಿಸಲಾದ ಕೋವಿಡ್ ಮಿತ್ರ ಕೇಂದ್ರಗಳಲ್ಲಿ ವೈದ್ಯಕೀಯ ಮತ್ತು ವೈದ್ಯಕೀಯೇತರ ಸ್ವಯಂಸೇವಕರು ಕೆಲಸ ಮಾಡಿದ್ದಾರೆ.

ಕೋವಿಡ್ ಮಿತ್ರ ಕೇಂದ್ರಗಳಲ್ಲಿ ಕೆಲಸ ಮಾಡಲು ಜಿಲ್ಲಾಡಳಿತ ಆಹ್ವಾನ ನೀಡಿದ ನಂತರ 65 ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರು ಆಸಕ್ತಿಯಿಂದ ಮುಂದೆ ಬಂದರು. ಈ ಸ್ವಯಂಸೇವಕರು ಸುಮಾರು ಎರಡು ತಿಂಗಳ ಕಾಲ ಆಮ್ಲಜನಕಯುಕ್ತ ಮತ್ತು ಐಸಿಯು ಹಾಸಿಗೆಗಳಿಗಾಗಿ ಜನರು ಪರದಾಡುವುದನ್ನು ತಪ್ಪಿಸಲು, ಚಿಕಿತ್ಸೆಯಲ್ಲಿ ಸಹಾಯ ಮಾಡಲು
ಕೋವಿಡ್ -19 ರೋಗಿಗಳಿಗೆ ಸಲಹೆ ನೀಡುತ್ತಾರೆ. ಆದರೆ ಅವರಿಗೆ ಪ್ರಮಾಣಪತ್ರಗಳನ್ನು ನೀಡುವ ಭರವಸೆ ಮತ್ತು ಅವರ ಪ್ರಯತ್ನಗಳನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಕೋವಿಡ್ ಮಿತ್ರ ಕೇಂದ್ರಗಳಿಂದ ವಾಪಾಸಾಗಿ ತಿಂಗಳು ಕಳೆದಿದೆ, ಆದರೆ ಅವರು ನೀಡಿದ್ದ ಭರವಸೆ ಯಾವುದು ಇನ್ನೂ ಈಡೇರಿಲ್ಲ, ಎಸ್ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಂದ ಹಿಡಿದು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವವರು ಹಾಗೂ ಉದ್ಯಮಿಗಳು ಕೂಡ ಹಗಲು ರಾತ್ರಿ ಎನ್ನದೇ ಕೋವಿಡ್ ಮಿತ್ರ ಕೇಂದ್ರಗಳಲ್ಲಿ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ದಾರೆ.

ಆದರೆ ಜಿಲ್ಲಾಡಳಿತ ಭರವಸೆ ಈಡೇರಿಸದ ಕಾರಣ ಮುಂದಿನ ದಿನಗಳಲ್ಲಿ ಸ್ವಯಂ ಸೇವಕರು ಕೆಲಸ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕಾಗುತ್ತದೆ ಎಂದು ಸ್ವಯಂ ಸೇವಕರೊಬ್ಬರು ತಿಳಿಸಿದ್ದಾರೆ.

ದಿನದ 24 ಗಂಟೆಯೂ ನಿದ್ದೆ ಮಾಡದೇ ಸ್ವಯಂ ಸೇವಕರು ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ.7 ಗಂಟೆಗಳ ಕಾಲ ಸತತವಾಗಿ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿದ್ದರು. ಅವರ ಕೆಲಸಕ್ಕೆ ನಾವು ಮೆಚ್ಚುಗೆ ಸೂಚಿಸಿ ಪ್ರೇರಪಣೆ ನೀಡಬೇಕು.

ಅವರು ಸಲ್ಲಿಸಿರುವ ಸೇವೆಗೆ ಮೈಸೂರು ಪಾಲಿಕೆ ಸೂಕ್ತ ಗೌರವ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೆಎಂ ನಿಶಾಂತ್ ಹೇಳಿದ್ದಾರೆ.

ಕೋವಿಡ್ ಎರಡನೇ ಅಲೆ ವೇಳೆ ಶ್ರಮಿಸಿದ ಕೋವಿಡ್ ವಾರಿಯರ್ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಮಾಣ ಪತ್ರ ಕೊಡಿಸಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೇಳಿತ್ತು. ಕಾರ್ಯಕ್ರಮವೇನೋ ನಡೆಯಿತು, ಆದರೆ ನಮಗೆ ಯಾವುದೇ ಪ್ರಮಾಣ ಪತ್ರ ನೀಡಲಿಲ್ಲ, ಕನಿಷ್ಠ ನಮಗೆ ಮಾನ್ಯತೆ ಗೌರವ ನೀಡಲಿದ್ದಾರೆ ಎಂದು ನಾವು
ನೀರಿಕ್ಷಿಸಿದ್ದೆವು, ಕೊನೆಗೆ ಅದು ಕೂಡ ಆಗಲಿಲ್ಲ, ಇದರಿಂದ ನಮಗೆ ಬೇಸರವಾಗಿದೆ ಎಂದು ಎಂದು ಸ್ವಯಂ ಸೇವಕರೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Share