ಹಾರರ್-ಕಾಮಿಡಿ 'ಆಂಡಾಳಮ್ಮ' ಸಿನಿಮಾದಲ್ಲಿ ಎಂಜಿ ಶ್ರೀನಿವಾಸ್

Saturday, July 10, 2021

ಓಲ್ಡ್ ಮಾಂಕ್ ಸಿನಿಮಾ ನಂತರ ನಟ ನಿರ್ದೇಶಕ ಎಂಜಿ ಶ್ರೀನಿವಾಸ್ ಮತ್ತೊಂದು ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.

ಜುಲೈ 9 2021 ರಂದು ತಮ್ಮ ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಜುಲೈ 9 ರಂದು ಶ್ರೀನಿವಾಸ್ ನಟ ಶ್ರೀನಿವಾಸ್ ಹುಟ್ಟುಹಬ್ಬವಿದ್ದು ಅಂದೇ ಹೊಸ ಪ್ರಾಜೆಕ್ಟ್ ಘೋಷಿಸಲಾಗಿದೆ. ಹಾರರ್ ಕಾಮಿಡಿಗೆ ಆಂಡಾಳಮ್ಮ ಎಂದು ಟೈಟಲ್ ಇಡಲಾಗಿದೆ.

ಶ್ರೀನಿ ಇದರ ಜೊತೆಗೆ ಉಮೇಶ್ ಕೃಷ್ಣನ್ ನಿರ್ದೇಶನದ ಕೃಷ್ಣನ್ ಮ್ಯಾರೇಜ್ ಸ್ಟೋರಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 

ಚಿತ್ರದ ಕಥೆ ಪುರಾತನ ನೀರಿನ ಮಡಕೆಯೊಳಗೆ ಸಿಕ್ಕಿಬಿದ್ದ ಭೂತದ ಕುರಿತಾಗಿದೆ. ಮಡಕೆ ನನ್ನ ಪಾತ್ರದ ಮನೆಯಲ್ಲಿ ಕೊನೆಗೊಳ್ಳುತ್ತದೆ. ನಂತರ ಏನಾಗುತ್ತದೆ ಎಂಬುದು ಕಥೆಯ ಸಸ್ಪೆನ್ಸ್, ಇದು ಹಾರರ್ ಚಿತ್ರವಾಗಿದ್ದರೂ, ಇದು ಕೆಲವು ಹಾಸ್ಯ ಸನ್ನಿವೇಶಗಳನ್ನು ಸಹ ಹೊಂದಿದೆ ಎಂದು ಶ್ರೀನಿ ಹೇಳುತ್ತಾರೆ. 

ಅಂಡಾಲಮ್ಮ ಶೂಟಿಂಗ್ ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಕರ್ನಾಟಕದ ಹಲವು ಭೂ ಸದೃಶಗಳ ನೈಜ ಸಾರವನ್ನು ಚಿತ್ರದೊಂದಿಗೆ ಸೆರೆಹಿಡಿಯುವ ಉದ್ದೇಶವನ್ನು ತಯಾರಕರು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀನಿ ನಟನೆಯ ಬೀರಬಲ್ ಸಿನಿಮಾ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ಬಿಂಗ್ ಆಗುತ್ತಿರುವುದಕ್ಕೆ  ಎಕ್ಸೈಟ್ ಆಗಿದ್ದಾರೆ, ಜೊತೆಗೆ ರಿಲೀಸ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದರ ಜೊತೆಗೆ ಹಿಂದಿ ಡಬ್ಬಿಂಗ್ ನಲ್ಲೂ ಕೆಲಸ ಮಾಡುತ್ತಿದ್ದಾರೆ.

Share